ಕರ್ನಾಟಕದಲ್ಲಿ ಮರಾಠರು 10 ಸಂಸದೀಯ ಮತ್ತು 40 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಅಂಶವಾಗಿ ಪ್ರಭಾವವನ್ನು ಹೊ… | City Today News (City today.media) June 1 | ಕರ್ನಾಟಕದಲ್ಲಿ ಮರಾಠರು 10 ಸಂಸದೀಯ ಮತ್ತು 40 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಅಂಶವಾಗಿ ಪ್ರಭಾವವನ್ನು ಹೊಂದಿರುವ ಸುಮಾರು 50 ಲಕ್ಷ ಜನ ಸಂಖ್ಯೆ ಹೊಂದಿರುವ ಸಾಕಷ್ಟು ದೊಡ್ಡ ಮತದಾರರನ್ನು ಹೊಂದಿದ್ದೇವೆ ಎಂಬ ಅಂಶಕ್ಕೆ ನೀವುಗಳು ಹೊತ್ತು ನೀಡಬೇಕಾಗಿ ಬಯಸುತ್ತೇವೆ. ಕರ್ನಾಟಕದಲ್ಲಿ ಮರಾಠ ಸಮುದಾಯವು ಹಿಂದುತ್ವ ಮತ್ತು ಬಿಜೆಪಿ ಸಿದ್ಧಾಂತದ ಪ್ರಬಲ ಬೆಂಬಲಿಗರಾಗಿದ್ದಾರೆ ಮತ್ತು ಕರ್ನಾಟಕದಲ್ಲಿ ಮರಾಠರು ಪಕ್ಷ ಪ್ರಾರಂಭದಿಂದಲೂ ಬಿಜೆಪಿಯ ಪರವಾಗಿದ್ದಾರೆ. ಡಾ. ಎಂ.ಜಿ ಮೂಳೆ ಯಾವಾಗಲೂ ತಮ್ಮನ್ನು ಸಭ್ಯ ಮತ್ತು ಗೌರವಾನ್ವಿತ ರೀತಿಯಲ್ಲಿ ಸಮಾಜದ ಏಳಿಗೆಗೆ ತೊಡಗಿಸಿಕೊಂಡಿದ್ದಾರೆ ಮತ್ತು ವೃತ್ತಿಪರ ಹೆಚ್ಚಿನ ಸಮರ್ಪಣೆಯನ್ನು ತೋರಿಸುತ್ತಾರೆ . ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅವರ ಸಾಧನೆಗಳು ಗಮನಾರ್ಧಕವಾಗಿದೆ. ಡಾ. ಎಂ.ಜಿ ಮೂಳೆ ಹಿಂದೆ ಬಸವ ಕಲ್ಯಾಣದ ಶಾಸಕರಾಗಿ ತುಂಬಾ ಜನಪ್ರಿಯ ಕೆಲಸ ಕಾರ್ಯಗಳನ್ನು ಮಾಡಿರುತ್ತಾರೆ. ಈಗಲೂ ಸಹ ಕ್ಷೇತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಈ 73ರ ಇಳಿವಯಸ್ಸಿನಲ್ಲೂ ಅವರ ಕಾರ್ಯ ವೈಖರಿಯನ್ನು ಕಂಡು ಆಶ್ಚರ್ಯವಾಗುತ್ತದೆ. ನಮ್ಮ ಸಮಾಜದ ವ್ಯಕ್ತಿಯಾದಂತಹ ಡಾ. ಎಂ. ಜಿ ಮುಳೆ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ (ಒಐಅ) ಅಭ್ಯರ್ಥಿಯಾಗಿ ನಾಮ ನಿರ್ದೇಶನ ಮಾಡಲು ತಮ್ಮ ದೃಶ್ಯ ಮಾಧ್ಯಮ ಮದ್ರ ಮಾಧ್ಯಮದ ಮುಖಾಂತರ ಪ್ರಕಟಿಸಬೇಕಾಗಿ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಆರ್. ಕಮಲೇಶ್ ರಾವ್ ರಾಜ್ಯಾಧ್ಯಕ್ಷರು ತುಳಿಸಿದರು. City Today News 9341997936 | | | | You can also reply to this email to leave a comment. | | | | |
No comments:
Post a Comment